ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ನಮ್ಮ ಬಗ್ಗೆ

ಮೀನುಗಾರಿಕೆ ಇಲಾಖೆಗೆ ಸ್ವಾಗತ

             ಮೀನುಗಾರಿಕೆಯು ವಿದೇಶಿ ವಿನಿಮಯ ಹಾಗೂ ಉದ್ಯೋಗಾವಕಾಶದ ಸೃಷ್ಠಿಯ ಮೂಲವಾಗಿರುವುದರಿಂದ ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಇದರ ಜೊತೆಗೆ ಈ ವಲಯವು ಕೈಗಾರಿಕೆ ಉದ್ದಿಮೆಯ ಸ್ವರೂಪವನ್ನು ಸಹ ಹೊಂದಿದೆ. ಮಾನವನ ಆಹಾರದಲ್ಲಿ ಮೀನು ಕಡಿಮೆ ಬೆಲೆಯ ಪ್ರೋಟೀನ್ ಮೂಲವಾಗಿದೆ. ಮೀನುಗಾರಿಕೆ ಇಲಾಖೆಯನ್ನು 1957ರ ಇಸವಿಯಲ್ಲಿ ರಾಜ್ಯದಲ್ಲಿರುವ ಕರಾವಳಿ ಮತ್ತು ಒಳನಾಡು ವಲಯದ ಸಂಪನ್ಮೂಲಗಳನ್ನು ಉಪಯೋಗಿಸಿ ರಾಜ್ಯದ ಮೀನು ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಕರ್ನಾಟಕದಲ್ಲಿ ಸುಮಾರು 5.76 ಲಕ್ಷ ಹೆಕ್ಟೇರಗಳಷ್ಟು ಒಳನಾಡು ಜಲಸಂಪನ್ಮೂಲ, 8000 ಹೆಕ್ಟೇರ್ ಹಿನ್ನೀರು ಪ್ರದೇಶ, 2.38 ಲಕ್ಷ ಹೆಕ್ಟೇರಗಳಷ್ಟು ಜೌಗು ಮತ್ತು ಚೌಳು ಪ್ರದೇಶ ಮತ್ತು 27,000 ಚದರ ಕಿ.ಮೀ ಭೂಖಂಡ ಪ್ರದೇಶವನ್ನು ಹೊಂದಿದ 313.02 ಕಿ.ಮೀ ಉದ್ದದ ಕರಾವಳಿ ಪ್ರದೇಶ ಇರುತ್ತದೆ. ಮೀನುಗಾರಿಕೆ ಇಲಾಖೆಯು ಈ ಸಂಪನ್ಮೂಲಗಳ ಸಾರ್ವಜನಿಕರ ಸದ್ಬಳಕೆಗಾಗಿ ಹಾಗೂ ವಿಶೇಷವಾಗಿ ಮೀನುಗಾರರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

 

            ರಾಜ್ಯದ ಮೀನು ಉತ್ಪಾದನೆ ಎಂಬತ್ತರ ದಶಕದ ಆರಂಭದಲ್ಲಿ ಸುಮಾರು 2 ಲಕ್ಷ ಟನ್ ಗಳಷ್ಟಿದ್ದು, ಅದು ತೊಂಬತ್ತರ ದಶಕದ ಮಧ್ಯದಲ್ಲಿ ಸುಮಾರು 3 ಲಕ್ಷ ಟನ್ ಗಳಿಗೆ ಏರಿತು.  ಕಳೆದ ಐದು ವರ್ಷಗಳ ಅವಧಿಯಲ್ಲಿ ಸರಾಸರಿ ಮೀನು ಉತ್ಪಾದನೆ ಸುಮಾರು 5.65 ಲಕ್ಷ ಟನ್ ಗಳಿಗೆ ಏರಿದೆ. ಇದರಲ್ಲಿ ಕರಾವಳಿಯ ಕೊಡುಗೆ ಶೇ 66 ಇದ್ದರೆ ಒಳನಾಡಿನ ಕೊಡುಗೆ ಶೇ 34 ರಷ್ಟಿದೆ. 2013-14 ನೇ ಸಾಲಿನ ದೇಶದ ಒಟ್ಟು ಮೀನು ಉತ್ಪಾದನೆಯಲ್ಲಿ ರಾಜ್ಯದ ಕೊಡುಗೆ ಶೇ 5.86 ರಷ್ಟಿದೆ. ರಾಜ್ಯವು 2018-19ನೇ ಸಾಲಿನಲ್ಲಿ  ಒಳನಾಡು ಮೀನು ಉತ್ಪಾದನೆಯಲ್ಲಿ 9 ನೇ ಸ್ಥಾನವನ್ನು, ಕರಾವಳಿಯಲ್ಲಿ 4ನೇ ಸ್ಥಾನವನ್ನು ಹಾಗೂ ಒಟ್ಟು ಉತ್ಪಾದನೆಯಲ್ಲಿ 6ನೇ ಸ್ಥಾನವನ್ನು ಹೊಂದಿದೆ.  ರಾಜ್ಯದ ಪ್ರಸ್ತುತ ತಲಾ ಮೀನು ಲಭ್ಯತೆ 8.77 ಕೆ.ಜಿ.ಯಷ್ಟಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಗೆ ಮೀನುಗಾರಿಕೆ ವಲಯದ ಕೊಡುಗೆ 1993-94 ರಲ್ಲಿ ರೂ 16,316 ಲಕ್ಷಗಳಷ್ಟಿದ್ದದ್ದು 2018-19 ರಲ್ಲಿ ರೂ 6996 ಕೋಟಿಗಳಿಗೆ ಹೆಚ್ಚಿದೆ. ರಾಜ್ಯದ ಕರಾವಳಿ ಮೀನು ಉತ್ಪನ್ನದ ರಪ್ತು 2013-14ರಲ್ಲಿ 0.98ಲಕ್ಷ ಟನ್ ಗಳಿಷ್ಟಿದ್ದು 2018-19 ರಲ್ಲಿ 1.42 ಲಕ್ಷ ಟನ್ ಗಳಿಗೇರಿದೆ.

 

ಇತ್ತೀಚಿನ ನವೀಕರಣ​ : 17-04-2021 11:26 AM ಅನುಮೋದಕರು: Ramacharya


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೀನುಗಾರಿಕೆ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ